ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಸಂಸ್ಕೃತಿ ಕಾರ್ಯಕ್ರಮಗಳಿಗೆ ಪುರಭವನವನ್ನು ನೀಡಲು ಸಾಮಾನ್ಯ ಸಭೆಯ ನಿರ್ಧಾರ

ಸಕಲೇಶಪುರ: ಸಂಸ್ಕೃತಿ ಕಾರ್ಯಕ್ರಮಗಳಿಗೆ ಪುರಭವನವನ್ನು ನೀಡಲು ಸಾಮಾನ್ಯ ಸಭೆಯ ನಿರ್ಧಾರ

Thu, 03 Dec 2009 09:21:00  Office Staff   S.O. News Service
ಸಕಲೇಶಪುರ, ಡಿಸೆಂಬರ್ ೩:ಪುರಭವನದಲ್ಲಿ ಕನ್ನಡ ನಾಡು ನುಡಿ ಸಂಬಂದಿಸಿದಂತಹ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಲು ಸಂಘ ಸಂಸ್ಥೆಗಳಿಗೆ ಅವಕಾಶ ನೀಡಲು ಗುರುವಾರ ನಡೆದ ಪುರಸಭ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು. 
 
ಪಟ್ಟಣದ ಪುರಭವನದ ಕಛೇರಿಯಲ್ಲಿ ಪುರಸಭೆ ಅಧ್ಯಕ್ಷ ಯಾದ್‌ಗಾರ್ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆಸಿದ ಪುರಸಭೆಯ ಸದಸ್ಯರು, ಇಲ್ಲಿಯ ನಾಗರೀಕರು ಹಾಗು ಸಂಘ ಸಂಸ್ಥೆಗಳು ಯಾವುದೆ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಲು ಪಟ್ಟಣದ ಮಧ್ಯ ಭಾಗದಲ್ಲಿ ಯಾವುದೆ ಸಭಾಂಗಣ ಇಲ್ಲದೆ ಇರುವುದರಿಂದ ರಾಜಕೀಯ ಕಾರ್ಯಕ್ರಮ ಹಾಗು ಕೋಮು ಸಭೆಗಳನ್ನು ಹೋರತು ಪಡಿಸಿ ಇತರೆ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿ ನಿರ್ಣಯದ ಒಪ್ಪಿಗೆಗಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡಲು ಸಭೆ ತೀರ್ಮಾನಿಸಿತು. ಚರ್ಚೆಯ ಸಂದರ್ಭದಲ್ಲಿ ತನ್ನ ಅಬಿಪ್ರಾಯ ಮಂಡಿಸಿದ ಪುರಸಭ ಸದಸ್ಯ ಪ್ರಕಾಶ, ಕನ್ನಡ ಸಂಘಟನೆ ಹೆಸರಿನಲ್ಲಿ ಬೇರೆ ಕಾರ್ಯಕ್ರಮ ನಡೆಸಿದರೆ ಹೊಣೆಯಾರು ಎಂದು ಪ್ರಶ್ನಿಸುವ ಮೂಲಕ ತಮ್ಮ ಅಸಮಾದನ ಹೊರಗೆಡವಿದ್ದನ್ನು ಬಿಟ್ಟರೆ ಬಹುತೇಕ ಸದಸ್ಯರು ಸಂಘ ಸಂಸ್ಥೆಗಳು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಲು ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿದ್ದ ಶಾಸಕ ಹೆಚ್.ಕೆ ಕುಮಾರಸ್ವಾಮಿ ಪುರಭವನದ ಮುಖ್ಯದ್ವಾರವನ್ನು ಬದಲಾಯಿಸಿ ಕಾರ್ಯಕ್ರಮಗಳಿಗೆ ನೀಡಬಹುದು ಎಂಬ ಅಸಂಬದ್ದ  ಸಲಹೆ ಸಭೆಯಲ್ಲಿದ್ದವರನ್ನು ನೆಗೆಗಡಲಲ್ಲಿ ತೇಲುವಂತೆ ಮಾಡಿತು. ನಂತರ ಇತರ ಚರ್ಚೆಗಳೆಡಗೆ ಗಮನ ಸೆಳದ ಸದಸ್ಯ ಅಕ್ರಂಪಾಷ ಚಂಪಕನಗರದ ಹಲವು ರಸ್ತೆ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಮರು ಡಾಂಬರೀಕರಣ ಮಾಡುವವರಗೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬಾರದು ಹಾಗು ಇದೇ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನದ ಎದರು ಇರುವ ಪುರಸಬೆಯ ಅಂಗನವಾಡಿ ಕಟ್ಟಡ ತೆರವಿಗೆ ಮನವಿ ಮಾಡಿದರು ಇವರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ಅಧ್ಯಕ್ಷರಿಂದ ದೊರಕಿತು. ನಂತರ ಮಾತನಾಡಿದ ಪುರಸಭ ಅಧ್ಯಕ್ಷ ಇಭ್ರಾಹಿಂ ಪುರಸಭೆಯ ವ್ಯಾಪ್ತಿಯಲ್ಲಿ ನೀರು ಒದಗಿಸಲು ಉಪಯೋಗಿಸುತ್ತಿರುವ ಮೋಟರ್ ನಿರ್ವಹಣೆಗಾಗಿ ತಿಂಗಳಿಗೆ ೭೫ ಸಾವಿರ ಖರ್ಚು ಬರುತ್ತಿರುವುದರಿಂದ ೧೦೦ ಅಶ್ವಶಕ್ತಿಯ ಒಂದು ಹೊಸ ಮೋಟಾರ್ ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು ಅಧ್ಯಕ್ಷರ ಮಾತಿಗೆ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು. ಹೊಸ ಕಟ್ಟಡಗಳ ನಿರ್ಮಾಣಕ್ಕೆ ಪುರಸಭೆ ಪಡೆಯುತ್ತಿರುವ ಶುಲ್ಕ ದುಬಾರಿಯಾಗಿದ್ದು  ಪರಿಷ್ಕರಿಸುವಂತೆ ಸದಸ್ಯರಾದ ಉಮೇಶ್, ಜೈ ಬೀಮ್ ಮಂಜು ಒತ್ತಾಯಿಸಿದರು. 
 
ಸಭೆಯ ಆರಂಭಕ್ಕೂ ಮುನ್ನ ಮಾತನಾಡಿದ ಪುರಸಭ ಮುಖ್ಯಾಧಿಕಾರಿ ಶಿವಕುಮಾರ್ ನವಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡ ನೆನಪಿಸುವುದನ್ನು ತಪ್ಪಿಸಲು ಪ್ರತಿ ಪುರಸಭೆಯ ಸಾಮಾನ್ಯ ಸಭೆಯ ಆರಂಭಕ್ಕೂ ಮುನ್ನ ನಾಡ ಗೀತೆಯನ್ನು ಹಾಡಿಸಲು ನಿರ್ದರಿಸಲಾಗಿದೆ, ಈ ಕ್ರಮ ರಾಜ್ಯದಲ್ಲೆ ಪ್ರಥಮವಾಗಿದೆ ಎಂದರು ನಂತರ ನಾಡ ಗೀತೆಯನ್ನು ಹಾಡುವ ಮೂಲಕ ಸಭೆ ಪ್ರಾರಂಬಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಕಾಡಪ್ಪ, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.   


Share: